ಮೂತ್ರದಲ್ಲಿ ರಕ್ತಬಣ್ಣ (ಹಿಮೋಗ್ಲೋಬಿನ್) ಹೋಗುತ್ತಿರುವ ವಿಷಮ ಬಗೆಯ ಮಲೇರಿಯ ಜ್ವರ (ಬ್ಲ್ಯಾಕ್ ವಾಟರ್ ಫೀವರ್). ಮಲೇರಿಯ ತೀವ್ರವಾಗಿರುವ ಪ್ರದೇಶಗಳಲ್ಲಿ ಈ ಜ್ವರವೂ ಹರಡಿರುವಂತಿದೆ. == ಲಕ್ಷಣಗಳು == ರೋಗಿಯ ಮೂತ್ರ ಕರಿ ಶಾಯಿಯಂತಿರುವುದರಿಂದ ಈ ಹೆಸರಾಗಿದೆ. ರಕ್ತದಲ್ಲಿ ಸುತ್ತಾಡುತ್ತಿರುವ ಕೆಂಪು ರಕ್ತಕಣಗಳಲ್ಲಿ ಅರೆಪಾಲಿಗೂ ಹೆಚ್ಚಾಗಿ ಒಂದೇ ಬಾರಿ ಇಲ್ಲವೇ ಕೊಂಚಕೊಂಚವಾಗಿ ಮೇಲಿಂದ ಮೇಲೆ ರಕ್ತನಾಳಗಳೊಳಗೇ ಒಡೆದುಕೊಂಡು ಹಾಳಾಗುತ್ತಿರುತ್ತವೆ. ಸಾಮಾನ್ಯವಾಗಿ ಈ ರೋಗ ಹತ್ತಿದವನು ಉಳಿಯುವುದಿಲ್ಲ. ಮೇಲಿಂದ ಮೇಲೆ ಮಲೇರಿಯಗ್ರಸ್ತನಾದ ರೋಗಿ (ಕನಿಷ್ಟ ಪಕ್ಷ ನಾಲ್ಕು ಸಲ) ಅದೇ ಸ್ಥಳದಲ್ಲಿ (ಅಂದರೆ ಮಲೇರಿಯ ಪೀಡಿತ ಸ್ಥಳ) ಆರು ತಿಂಗಳ ಕಾಲ ಇದ್ದಾಗ ಆತನಿಗೆ ಕಂಕಾಳ ಜ್ವರ ಬರುವುದನ್ನು ಗಮನಿಸಿದ್ದಾರೆ. == ಕಾರಣ == ಕಂಕಾಳ ಜ್ವರ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಕೆಂಪು ರಕ್ತ ಕಣಗಳ ಪರಾವಲಂಬಿಯಿಂದ ಉಂಟಾಗುತ್ತದೆ. ಪ್ಲಾಸ್ಮೋಡಿಯಂ ವೈವ್ಯಾಕ್ಸ್ ಮುಖ್ಯ ಕಾರಣವೆಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ. == ಚಿಕಿತ್ಸೆ == ಅನ್ ಟಿ-ಮಲೇರಿಯ ರಾಸಾಯನಿಕ ಚಿಕಿತ್ಸೆ == ಪ್ರಸ್ತುತ ಈ ರೋಗ == ಇಂದು ಮಲೇರಿಯ ನಿರೋಧ ಸಾಕಷ್ಟು ಪರಿಣಾಮಕಾರಿಯಾಗಿರುವುದರಿಂದಲೂ ಹೊಸ ಮದ್ದುಗಳು ಬಂದಿರುವುದರಿಂದಲೂ ಈ ರೋಗದ ಸುಳಿವೇ ಇಲ್ಲ. == ಉಲ್ಲೇಖಗಳು ==